Monday, March 8, 2021

karnataka Budget 2021

ಕರ್ನಾಟಕ ರಾಜ್ಯದ 2021ನೇ ಸಾಲಿನ ಆಯವ್ಯಯದ ಪ್ರಮುಖ ಅಂಶಗಳು ಈ ಕೆಳಗಿನ ಮಾಹಿತಿಯಲ್ಲಿದೆ  ವೀಕ್ಷಿಸಿ..

Tuesday, April 18, 2017

ಪ್ರತಿಯೊಬ್ಬ ವ್ಯಕ್ತಿಗೂ ತಾನು ಅಂದುಕೊಂಡ ಗುರಿ ತಲುಪಲು ಬೇಕಾಗಿರುವುದು ಧೃಢ ನಿರ್ಧಾರ  
                                         ಪ್ರಾಮಾಣಿಕ ಪ್ರಯತ್ನ ಜೊತೆಗೆ..
                 ಸಾಮಾನ್ಯವಾಗಿ ದೇವರೆಂದರೇನು, ಆತ್ಮವಿಶ್ವಾಸವೆಂದರೇನು? ದೇವರು ಹಾಗೂ ಆತ್ಮ ವಿಶ್ವಾಸದ ನಡುವಿನ ಸಾಮ್ಯತೆಯೇನು, ವ್ಯತ್ಯಾಸವೇನು ಹಾಗೂ ದೇವರು ಮತ್ತು ಆತ್ಮವಿಶ್ವಾಸದ ನಡುವಿನ ಸಂಬಂದವೇನು ಎಂಬುದನ್ನು ಶ್ರೀ ಸಾಮಾನ್ಯರ ಅಂತರಂಗದ ಚಿಂತನೆಗಳ ವಿಶ್ಲೇಷಣೆಯೇ ದೇವರೆಂಬ ಆತ್ಮವಿಶ್ವಾಸ.
                ಶ್ರೀ ಸಾಮಾನ್ಯರ ಮನಸಲ್ಲಿ ದೇವರೆಂದರೆ ಪುಣ್ಯದ ಪ್ರತೀಖ, ದೇವರನ್ನು ನಂಬಿದರೆ ಒಳಿತು, ದೇವರನ್ನು ನೆನೆದರೆ ಸಾಕು ಎಲ್ಲವೂ ಫಲಿಸುತ್ತದೆ, ದೇವರೇ ಎಲ್ಲವನ್ನು ಮಾಡುತ್ತಾನೆ. ದೇವರು ನಮ್ಮೆಲ್ಲವನ್ನು ಆಟವಾಡಿಸುತ್ತಾನೆ ಎಂಬ ಭಾವನೆ ಇದೆ. ನಾಳಿನ ಬಗ್ಗೆ ಚಿಂತನೆ ಬೇಡ ದೇವರಾಡಿಸಿದಂತೆ ನಡೆದರೆ ಸಾಕು ಎಂಬ ನಿಲುವು.

               ಆದರೆ ದೇವರೆಂದರೇನು ಎಂಬುದೂ ಸಾಮನ್ಯವಾಗಿ ಜನರ ಮನಸ್ಸಲ್ಲಿ, ಶ್ರೀ ಸಾಮನ್ಯರ ಬುದ್ಧಿಯಲ್ಲಿ ಹಿಂದೂಗಳಿಗೆ ಬ್ರಹ್ಮವಿಷ್ಣು-ಮಹೇಶ್ವರ, ಮುಸ್ಲಿಂರಿಗೆ ಅಲ್ಲಾಹು, ಕ್ರೈಸ್ತರಿಗೆ ಯೇಸುಕ್ರಿಸ್ತ ಪ್ರಭುವೇ ದೇವರು. ಆತನೇ ಸೂತ್ರಧಾರ,ಆತನ ಆಟದ ಬೊಂಬೆಗಳೆ ನಾವುಗಳು ಎಂಬುದಾಗಿರುತ್ತದೆ. ಶ್ರೀ ಸಾಮಾನ್ಯನಿಗೆ ಏನಾದರೂ ಒಳಿತಾದರೂ ನಾವು ನಂಬಿದ ದೇವರು ನಮ್ಮನ್ನು ಕೈಬಿಡುವುದಿಲ್ಲ, ಕೆಡುಕಾದರೆ ದೇವರಿಗೆ ನಮ್ಮ ಮೇಲೆ ಕೃಪೆಯಿಲ್ಲ ಎಂಬ ಭಾವನೆ.

             ಒಮ್ಮೆ ಒಬ್ಬ ರೈತ ತನ್ನ ಜಮೀನಿನಲ್ಲಿ ತಾನು ಪೂಜಿಸುತ್ತಿದ್ದ ದೇವರನ್ನು ನಂಬಿ ಉಳಿಮೆ ಮಾಡಿ ಬೆಳೆಯನ್ನು ಬಿತ್ತಿದ. ಬೆಳೆಗೆ ಬೇಕಾದ ಎಲ್ಲಾ ರೀತಿಯ ಸಾಮಾಗ್ರಿಗಳನ್ನು ಕೂಡ ಹಾಕಿದ . ಶ್ರಮಪಟ್ಟು ಜಮೀನಿಗಾಗಿ ದುಡಿದ. ಮಳೆಯು ಚೆನ್ನಾಗಿ ಬಂದಿದ್ದರಿಂದ ಬೆಳೆಯು ಚೆನ್ನಾಗಿ ಬಂದು ಆತ ಸಂತೋಷದಿಂದ ಜೀವನ ಸಾಗಿಸಿ ದೇವರನ್ನು ನೆನೆದ. ಇದಕ್ಕೆ ಕಾರಣ ಆತನಲ್ಲಿದ್ದ ಕಾರ್ಯತತ್ಪರತೆ, ಬೆಳೆಯನ್ನು ಚೆನ್ನಾಗಿ ಮಾಡುತ್ತೇನೆಂಬ ಸ್ಥೈರ್ಯ. ಒಂದು ವೇಳೆ ಆತ ದೇವರಿದ್ದಾನೆ ಎಂದು ಬೆಳೆಯನ್ನು ಬಿತ್ತಿ ಸುಮ್ಮನಿದ್ದರೆ ಯಾವೂಂದು ಬೆಳೆಯು  ಕೂಡ ಬೆಳೆಯುತ್ತಿರಲಿಲ್ಲ. ಇದಕ್ಕೆ ದೇವರನ್ನು ದೂಷಿಸಿದರೆ ಅದು ವಿಪರ್ಯಾಸವೇ ಸರಿ.
             ಹೀಗೆ ನಾವು ನಮ್ಮ ಗೆಲುವಗೆ ದೇವರೆ ಕಾರಣ ಎನ್ನುವುದು,ನಮ್ಮ ವಿಫಲತೆಗೆ ದೇವರೆ ಕಾರಣವೆಂದು ದೂಷಿಸುವುದು ಸರಿಯಲ್ಲ. ನಮ್ಮ ಗೆಲುವಿಗೆ ನಮ್ಮ ಸೋಲಿಗೆ ದೇವರಿಗಿಂತ ಪ್ರಮುಖ ಪಾತ್ರವಹಿಸುವುದು ನಮ್ಮ ಚಲ, ನಮ್ಮ ಪ್ರಯತ್ನ ,ನಮ್ಮ ಕಾರ್ಯ, ನಮ್ಮ ಆತ್ಮ ವಿಶ್ವಾಸ, ಮಾಡಿಯೇ ತೀರುತ್ತೇನೆಂಬ ಅಚಲವಾದ ನಿರ್ಧಾರ.ಇಲ್ಲಿ ದೇವರು ಎಂಬುದು ನಮ್ಮ ಹಿಂದಿನ ಒಂದು ದೃಢವಾದ ಶಕ್ತಿಯಾಗಿ ನಮ್ಮನ್ನು ಮುನ್ನಡೆಸುವ ವಾಹನದ ಗಾಲಿಯಂತೆ ಕಾರ್ಯ ನಿರ್ವಹಿಸುತ್ತದೆ ಎಂದರೆ ತಪ್ಪಾಗಲಾರದು.

                 ಶ್ರೀ ಸಾಮಾನ್ಯನ ಜೀವನದ ಹಾಗೂ-ಹೋಗುಗಳನ್ನು ಮೆಲುಕು ಹಾಕುತ್ತಾ ಒಬ್ಬ ವ್ಯಕ್ತಿಗೆ ಒಳ್ಳೆಯ ಸಂಭಾವನೆ ದೊರಕುವ ಉದ್ಯೋಗ ದೊರಕಿದರೆ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ, ಜೀವನದಲ್ಲಿ ಒಳ್ಳೆ ಸಫಲತೆಯನ್ನು ಪಡೆದರೆ ಜನರ ಮಾತಿನಲ್ಲಿ ,ಜನರ ಮನಸ್ಸಿನಲ್ಲಿ ಆತನಿಗೆ ದೇವರ ಕೃಪೆಯಿದೆ; ಆದ್ದರಿಂದಲೇ ಅದು ಸಾಧ್ಯವಾಯಿತೆಂಬ ಭಾವನೆ. ಆದರೆ ನಾವು ವ್ಯಕ್ತಿಗತವಾಗಿ ವಿಶ್ಲೇಷಣೆ ಮಾಡಿದಾಗ ಆತ ಸ್ಥಾನಕ್ಕೆ ಹೋಗಲು ಆತ ಪಟ್ಟ ಪ್ರಯತ್ನ,ಕಷ್ಟ,ಎಲ್ಲದಕ್ಕಿಂತಲೂ ಆತನಲ್ಲಿ ನಾನು ಮಾಡಿಯೇ ತೀರುತ್ತೇನೆಂಬ ಆತ್ಮವಿಶ್ವಾಸ ಸಫಲತೆಗೆ ಮುಖ್ಯ ಕಾರಣವಾಗಿರುತ್ತದೆ.

             ವಿಚಾರ ಹೀಗಿರುವಾಗ ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ ನಾವುಗಳು ದೇವರನ್ನು ಕಡೆಗಣಿಸುವಂತಿಲ್ಲ . ನಾವು ಏನೇ ಕಷ್ಟ ಪಟ್ಟಿದ್ದರೂ, ನಾವು ಏನೇ ಪ್ರಯತ್ನಪಟ್ಟಿದ್ದರೂ, ನಮ್ಮ ಆತ್ಮ ವಿಶ್ವಾಸ ಏನೇ ಇದ್ದರೂ ಅದರ ಇನ್ನೊಂದು ಮುಖವೇ ದೇವರು. ಹೇಗೇ ನಾಣ್ಯಕ್ಕೆ ದ್ವಿಮುಖವಿದ್ದರೆ ಸೂಕ್ತವೋ  , ಅದೇ ರೀತಿ ದೇವರು ಮತ್ತು ಆತ್ಮ ವಿಶ್ವಾಸ ಒಂದೇ ನಾಣ್ಯದ ಎರಡು ಮುಖಗಳಂತೆ. ದೇವರು ನನ್ನನ್ನು ಸಫಲನನ್ನಾಗಿ ಮಾಡುತ್ತಾನೆಂದು ನಂಬಿ ನಮ್ಮ ಕೆಲಸವನ್ನು, ನಮ್ಮ ಕಾರ್ಯವನ್ನು, ನಮ್ಮ ಗುರಿಯನ್ನು ಆತ್ಮ ವಿಶ್ವಾಸದೊಂದಿಗೆ ಮಾಡಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಇಲ್ಲಿ ಕಾರ್ಯರೂಪಗೊಂಡಿದ್ದು ನಮ್ಮ ಶ್ರಮವೇ ಹೊರತು ದೇವರ ಪುಣ್ಯವಲ್ಲ,ಆದರೂ ಅದಕ್ಕೆ ದೇವರ ರೂಪ ಕೊಟ್ಟರೆನೆ ಸೂಕ್ತ ಎಂಬ ವಿಶ್ಲೇಷಣೆಯೇ ನನ್ನ ದೇವರೆಂಬ ಆತ್ಮ ವಿಶ್ವಾಸ ಕಿರು ಲೇಖನ.


                                                                     - ಮನು ಗೌತಳ್ಳಿ    
Feedback : Manu Gowthally/facebook.com
                   Manu Gowthally/youtube.com 


Friday, March 24, 2017

Bettada Bhairaveshwara Temple( Maragunda- Sakaleshapura)
ಬೆಟ್ಟದ ಬೈರವೇಶ್ವರ ದೇವಾಲಯ(ಮರಗುಂದ- ಸಕಲೇಶಪುರ)





Thursday, February 23, 2017

* ಸೆಲ್ಯೂಲರ್ ಜೈಲ್ *
(CELLULER JAIL)
                                                                                                         
( ಸೆಲ್ಯೂಲರ್ ಜೈಲ್ ನ ಮಾಹಿತಿಯೊಂದಿಗೆ ಇತ್ತೀಚಿನ ಸಮಾಜದ ಅಹಿತಕಾರಿ ಬೆಳವಣಿಗೆಯ ಬಗ್ಗೆ ಸಣ್ಣ ವಿಶ್ಲೇಷಣೆ)
                                                                                                          - MANU GOWTHALLY


          ಸ್ನೇಹಿತರೇ ನೀವು ಸೆಲ್ಯೂಲರ್ ಜೈಲ್ ಬಗ್ಗೆ ತಿಳಿದಿದ್ದೀರಾ ಎಂದು ತಿಳಿದುಕೊಳ್ಳುತ್ತೇನೆ . ಸೆಲ್ಯೂಲರ್ ಜೈಲ್ ಗ್ರೇಟ್ ಅಂಡಮಾನ್ ದ್ವೀಪದಲ್ಲಿರುವ ಅತ್ಯಂತ ಕ್ರೂರವಾದ ಜೈಲಾಗಿತ್ತು. ಇದನ್ನು "ಕಾಲಾಪಾನಿ" ಎಂಬುದಾಗಿಯೂ ಕರೆಯಲಾಗುತ್ತದೆ.
       ಇದನ್ನು ಬ್ರಿಟಿಷರ ಕಾಲದಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಶಿಕ್ಷಿಸುವ ಸಲುವಾಗಿಯೇ ಸುತ್ತಲೂ ಸಮುದ್ರದಿಂದ ಆವೃತ್ತವಾಗಿರುವ  ಭಾರತದ ವಸಾಹತುಶಾಹಿಯಾದ ಅಂಡಾಮಾನ್ ನಿಕೋಬರ್ ದ್ವೀಪದಲ್ಲಿ ನಿರ್ಮಾಣ ಮಾಡಲಾಗಿತ್ತು.
        ಈ ಸೆಲ್ಯೂಲರ್ ಜೈಲ್ ನ್ನು 1896 ರಿಂದ 1906 ರ ನಡುವೆ ನಿರ್ಮಾಣ ಮಾಡಲಾಗಿತ್ತಾದರೂ 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮದ ದಿನಗಳಿಂದ ಜೈಲುಗಳಾಗಿ ಅಂಡಮಾನ್ ನಿಕೋಬರ್ ದ್ವೀಪಗಳನ್ನು ಬಳಸಲಾಗುತ್ತಿತ್ತು.
      ಈ ಜೈಲ್ ನ ರಚನೆ ಹೇಗಿತ್ತೆಂದರೆ ಇಲ್ಲಿ ಒಬ್ಬ ಖೈದಿ ಇನ್ನೊಬ್ಬ ಖೈದಿಯನ್ನು ಸಂವಹನ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಏಕಾಂಗಿಯಾಗಿಯೇ ಕನಿಷ್ಠ ಜೀವನ ಸಾಗಿಸಬೇಕಾಗಿತ್ತು. ಈ ಜೈಲ್ ನಲ್ಲಿ ಖೈದಿಗಳಿಗೆ ಯಾವೆಲ್ಲಾ ಶಿಕ್ಷೆಗಳನ್ನು ವಿಧಿಸುತ್ತಿದ್ದರು ಎಂಬುದನ್ನು ವೀಕ್ಷಿಸಿದರೆ ನೀವೆ ಒಂದು ಬಾರಿ ಈ ರೀತಿಯ ಜೀವನವನ್ನು ಕೂಡ ಭಾರತೀಯರು ಅನುಭವಿಸಿದ್ದಾರೆಯೇ ಎಂಬುವಂತಹ ಬ್ರಾಂತಿ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.



            ಇಂತಹ ಶಿಕ್ಷೆಯನ್ನು ಅನುಭವಿಸಿದವರಲ್ಲಿ ಪ್ರಮುಖರೆನಿಸಿಕೊಂಡವರೆಂದರೆ ವಿನಾಯಕ ದಾಮೋದರ ಸಾವರ್ಕರ್, ದಿವಾನ್ ಸಿಂಗ್, ಯೋಗೆಂದ್ರ ಶುಕ್ಲ  ಇನ್ನಿತರರು . ಇದೇ ಜೈಲಿನಲ್ಲಿ ವಿವಿಧ ಸೆಲ್ ನಲ್ಲಿ ಬಂಧಿತರಾಗಿದ್ದು ಸಾವರ್ಕರ್ ಸಹೋದರರಿಗೆ ಇಬ್ಬರು ಕೂಡ ಇದೇ ಜೈಲಿನಲ್ಲಿದ್ದೇವೆ ಎಂಬ ಮಾಹಿತಿ ಇರಲಿಲ್ಲ. ಅಷ್ಟರ ಮಟ್ಟಿಗೆ ಕ್ರೂರಯುತವಾದ ಶಿಕ್ಷೆಯನ್ನು ಜೈಲಿನಲ್ಲಿ ವಿಧಿಸಲಾಗುತ್ತಿತ್ತು.
         ಸ್ನೇಹಿತರೇ ನಾನು ಹೇಳುವುದಿಷ್ಟೇ ಈ ರೀತಿ ದೇಶಕ್ಕಾಗಿ, ದೇಶದ ಜನತೆಗಾಗಿ ತಮ್ಮ ಪ್ರಾಣವನ್ನೇ ಪಣತೊಟ್ಟು ವೀರರಾಗಿ ಮಡಿದ ಭಗತ್ ಸಿಂಗ್ ಆಗಿರಬಹುದು, ಆಜಾದ್ ಚಂದ್ರಶೇಖರ್ ಇರಬಹುದು, ಸುಖದೇವ್ ಆಗಿರಬಹುದು, ರಾಜಗುರು ಆಗಿರಬಹುದು ಇವರೆಲ್ಲಾ ದೇಶಕ್ಕಾಗಿ ತಮ್ಮ ಪ್ರಾಣವನ್ನೆ ಇಳಿವಯಸ್ಸಿನಲ್ಲಿಯೇ ತ್ಯಜಿಸಿದವರು.
ಭಗತ್ ಸಿಂಗ್ ಮರಣ ಹೊಂದುವಾಗ ಅವರ ವಯಸ್ಸು 21, ಚಂದ್ರಶೇಖರ್ ಆಜಾದ್ ಮರಣಹೊಂದುವಾಗ ಅವರ ವಯಸ್ಸು 24.  ಹೀಗೆ ದೇಶಕ್ಕಾಗಿ ಸ್ವಾತಂತ್ರ್ಯಕ್ಕಾಗಿ ಇವರೆಲ್ಲಾ ತಮ್ಮ ಪ್ರಾಣವನ್ನೆ ಅಂದು ತ್ಯಜಿಸಿದ್ದಾರೆ. ಇಂದಿಗೂ ನಮ್ಮ ಸೈನಿಕರು ದೇಶಕ್ಕಾಗಿ ಗಡಿಯಲ್ಲಿ ಹೋರಾಡುತ್ತಿದ್ದಾರೆ. 
         ನನ್ನ ವಾದ ಇಷ್ಟೇ ಇತ್ತೀಚಿನ ಬೆಳೆವಣಿಗೆಯಂತೆ ಸಮಾಜದಲ್ಲಿ ಅತ್ಯಾಚಾರ, ಕೊಲೆ, ದರೋಡೆ, ಕಳ್ಳತನಗಳಂತಹ ನೀಚ ಕೃತ್ಯಗಳನ್ನು ಹೆಚ್ಚು ಮಾಡುತ್ತಿರುವವರನ್ನು ಇನ್ನೂ ಇಳಿವಯಸ್ಸಿನ ಯುವಕರು. ಇದು ಬದಲಾಗಬೇಕು, ಅಂದು ದೇಶಕ್ಕಾಗಿ ಹೋರಾಡಿದ ವೀರ ತ್ಯಾಗಿಗಳನ್ನು ನೆನೆಯಬೇಕು. ಅವರಂತೆ ಸಮಾಜಕ್ಕಾಗಿ , ದೇಶಕ್ಕಾಗಿ ಪ್ರಾಣಕೊಡುವುದಂತೂ ಬೇಡ ಆದರೆ ಬೇರುಬ್ಬರ ಪ್ರಾಣಕ್ಕೆ ಮಾರಕ, ಬೇರೊಬ್ಬರ ಮಾನಕ್ಕೆ ಮಾರಕರಾಗುವುದನ್ನು ನಿಲ್ಲಿಸಬೇಕು. ಉತ್ತಮ ಮೌಲ್ಯಗಳಿಂದ ಕೂಡಿದ  ಉತ್ತಮ ಸಮಾಜ ಕಟ್ಟುವ ಕಾರ್ಯ ನಡೆಯಬೇಕು. ಆಗ ಮಾತ್ರ ಸಮಾಜದಲ್ಲಿ, ದೇಶದಲ್ಲಿ ಒಬ್ಬ ಎಂದೆಂದಿಗೂ ಜನರ ಮನಸ್ಸಲ್ಲಿ ನೆನಪಿನಲ್ಲಿರುವ ವ್ಯಕ್ತಿಯಾಗಿ ಉಳಿಯಲು ಸಾಧ್ಯ ಎನ್ನುವುದು ನನ್ನ ಭಾವನೆ.

                                                                                                                   ಇಂತಿ ತಮ್ಮ
MANU S GOWTHALLY
Visit : manugowthally.blogspot.in
Subscribe : manugowthally/youtube.com
                    Manu gowthally/facebook.com





karnataka Budget 2021

ಕರ್ನಾಟಕ ರಾಜ್ಯದ 2021ನೇ ಸಾಲಿನ ಆಯವ್ಯಯದ ಪ್ರಮುಖ ಅಂಶಗಳು ಈ ಕೆಳಗಿನ ಮಾಹಿತಿಯಲ್ಲಿದೆ  ವೀಕ್ಷಿಸಿ.. ...